ಕನ್ನಡ ಜಾನಪದ ನಿಘಂಟು | Kannada Janapada Nighantu PDF



ಕನ್ನಡ ಜಾನಪದ ನಿಘಂಟು (ಪದ ಸಂಸ್ಕೃತಿ ಕೋಶ) ಸಂಪುಟ – 3 PDF Book in Kannada Free Download



Kannada-Janapada-Nighantu-PDF



ಕನ್ನಡ ಜಾನಪದ ನಿಘಂಟು ಪುಸ್ತಕ | Kannada Janapada Nighantu Book PDF Download

ಜಾನಪದದ ಅಧ್ಯಯನದಲ್ಲಿ ಕರ್ನಾಟಕದ ವಿದ್ವಾಂಸರು ಮಾಡಿರುವ ಸಾಧನೆ ಅನನ್ಯವಾದದ್ದು. ಕಳೆದ ಸುಮಾರು ಒಂದೂವರೆ ಶತಮಾನದಲ್ಲಿ ಈ ಅಧ್ಯಯನ ಬಹುಮುಖಿಯಾಗಿ ಸಾಗಿದೆ. ಮೊದಮೊದಲು ಜಾನಪದದ ಸಂಗ್ರಹಕಾರ, ಅದರಲ್ಲೂ ಗೀತ ಜಾನಪದದ ಸಂಗ್ರಹಕಾರ ಹೆಚ್ಚಿನ ಆದ್ಯತೆಯನ್ನು ಪಡೆದದ್ದು ಸಹಜವೇ.

ಆಮೇಲಾಮೇಲೆ, ಕರ್ನಾಟಕದ ವಿಶ್ವವಿದ್ಯಾಲಯಗಳು ಜಾನಪದವನ್ನು ಅಧ್ಯಯನದ ವಿಷಯವನ್ನಾಗಿ ಪರಿಗಣನೆ ಮಾಡಿದ ಮೇಲೆ, ಭಾಷಿಕ ಜಾನಪದದ ಜೊತೆಗೆ ವಸ್ತು ಜಾನಪದ, ಆಚರಣ ಜಾನಪದ ಮೊದಲಾದುವೂ ಸಂಗ್ರಹಯೋಗ್ಯವೆನಿಸಿ ತಮ್ಮ ಸಾಂಸ್ಕೃತಿಕ ಮಹತ್ವವನ್ನು ದಾಖಲುಗೊಳಿಸಿಕೊಂಡುದು ಕನ್ನಡ ಜಾನಪದ ಅಧ್ಯಯನದ ಚರಿತ್ರೆಯಲ್ಲಿ ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಸಂಗತಿ, ಅನಿವಾರವೂ ಅತ್ಯಗತ್ಯವೂ ಆಗಿದ್ದ ಈ ಬೆಳವಣಿಗೆಯಿಂದಾಗಿ ಕರ್ನಾಟಕ ವಾಚಿಕ ಪರಂಪರೆಯ ಸಾಂಸ್ಕೃತಿಕ ವಿಶಿಷ್ಟತೆಗಳನ್ನು ಬೃಹತ್ ಪ್ರಮಾಣದಲ್ಲಿ ದಾಖಲು ಮಾಡಿದ ಹೆಗ್ಗಳಿಕೆ ಸಾಧ್ಯವಾಯಿತು.

ಇದಕ್ಕೆ ಬಹಳ ಮುಖ್ಯವಾದ ಕಾರಣ ನಮ್ಮ ಜಾನಪದ ಸಂಗ್ರಹಕಾರರ ಮತ್ತು ವಿದ್ವಾಂಸರ ಅವಿರತ ದುಡಿಮೆ, ಫೀಟ್, ಕಿಟ್ಟೆಲ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರಿಂದ ಆರಂಭವಾದ ಈ ಕಾರ ಇಪ್ಪತ್ತನೇ ಶತಮಾನದ ನಡುಮಧ್ಯಾಹ್ನದ ಹೊತ್ತಿಗೆ ದೇಶೀಯ ಸಂಗ್ರಹಕಾರರನ್ನೂ ಒಳಗೊಂಡು ಬತ್ತದ ತೊರೆಯಾಗಿ ಹರಿಯಿತು. ಆನಂತರದಲ್ಲಿ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಸಂಗ್ರಹ, ವಿಶ್ಲೇಷಣೆ ಮತ್ತು ಬೋಧನೆಯಲ್ಲಿ ತೊಡಗಿಕೊಂಡು ಸಂಗ್ರಹ ಕಾರಕ್ಕೂ ವಿಶ್ಲೇಷಣಾ ಕಾವ್ಯಕ್ಕೂ ಶಿಸ್ತುಬದ್ಧ ಅಧ್ಯಯನದ ಆಯಾಮಗಳನ್ನು ರೂಪಿಸಿದರು.





ಪುಸ್ತಕಕನ್ನಡ ಜಾನಪದ ನಿಘಂಟು ಪಿಡಿಎಫ್ / Kannada Janapada Nighantu PDF
ಲೇಖಕಡಾ. ರಾಮೇಗೌಡ (ರಾಗೌ)
ಪ್ರಕಾಶಕಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಭಾಷೆಕನ್ನಡ
ಪುಟಗಳು862
ಗಾತ್ರ161 MB
ಕಡತPDF
StatusOK


Download Button



Post a Comment